23 Feb 2015

Navalgund History (ನವಲಗುಂದದ ಇತಿಹಾಸ)





ನವಲಗುಂದ ಧಾರವಾಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ನವಲಗುಂದ ಎಂಬ ಹೆಸರು ಹೇಗೆ ಬಂತು ಎನ್ನುವುದಕ್ಕೆ ಊರ ಹಿರಿಯರು ಹೆಳುವುದೇನೆ0ದರೆ - ಇಲ್ಲಿಯ ಜನಜೀವನ ಎಲ್ಲ ಕಡೆಗೆ ಪಸರಿಸುವುದಕ್ಕಿಂತ ಮೊದಲು ಸಾಕಷ್ಟು ನವಿಲುಗಳು ಇಲ್ಲಿಯ ಗುಡ್ಡದ ಮೇಲೆ ವಾಸಿಸುತಿದ್ದವೆಂದೂ ಹಾಗೂ ಈಗಲೂ ಸಹ ಕಣ್ಣಿಗೆ ಬೀಳುತ್ತವೆ0ದು ಹೇಳುತ್ತಾರೆ. ಅದರಿಂದಾಗಿ ಈ ತಾಲೂಕಿಗೆ ಮೊದಲು ನವಿಲುಗಳಗುಡ್ಡ, ನವಿಲುಗುಂದ, ತದನಂತರ ನವಲಗುಂದ ಎಂಬ ಹೆಸರು ಕೂಡಾ ಬಂತು ಎಂಬುದು ಒಂದು ಪ್ರತೀತಿ. ಹಾಗೇಯೇ ಇಲ್ಲಿ ಹಿಂದೂ ಸಂಸ್ಕೃತಿಯ ಅನೇಕ ಮಹಿಮಾಪುರುಷರು ಬಾಳಿ-ಬೆಳಗಿ ಹೋಗಿರುವರು. ಅವರಲ್ಲಿ, ಹುಬ್ಬಳ್ಳಿಯ ಶ್ರೀಸಿದ್ಧಾರೂಢರೊಡನಾಡಿದ ಶ್ರೀ ಅಜಾತ ನಾಗಲಿಂಗದೇವರು ಹೆಸರುವಾಸಿಯಾಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕರುನಾಡ ಧಾರ್ಮಿಕ ಸಂಸ್ಕೃತಿಯ ಪ್ರತೀಕವಾಗಿರುವ ಇಲ್ಲಿರುವ ಮಠಗಳಾದ
  • ಶ್ರೀಸಿದ್ದೇಶ್ವರರ ಶ್ರೀಪಂಚಗೃಹ ಹಿರೇಮಠ, 
  • ಶ್ರೀಬಸವರಾಜದೇವರ ಶ್ರೀಗವಿಮಠ,
  • ಶ್ರೀನಾಗಲಿಂಗನ ಶ್ರೀಅಜಾತ ನಾಗಲಿಂಗಮಠ ಮತ್ತು 
  • ಹುರಕಡ್ಲಿ ಶ್ರೀಅಜ್ಜನವರ ತಪೋಭೂಮಿ ಇದೆ.
        ಹೀಗೆ ಇನ್ನೂ ಅನೇಕ ಕಾಣ ಸಿಗುವ ದೇವಸ್ಥಾನಗಳಿವೆ. ಮೊದಲು ಈ ಪ್ರದೇಶವು ಶ್ರೀ ಲಿಂಗರಾಜ ದೇಸಾಯಿಯವರ ಆಡಳಿತದಲ್ಲಿ ಇತ್ತೆಂದು ಹೇಳುತ್ತಾರೆ. ಅವರಿದ್ದರೆಂಬ ಕುರುಹುಗಳಾಗಿ ಈಗ ಇಲ್ಲಿ ಕಾಣಸಿಗುವ ದೇಸಾಯಿವಾಡೆ,ಶ್ರೀಸಂಕಮ್ಮತಾಯಿ ಭಾವಿ, ಶ್ರೀನೀಲಮ್ಮತಾಯಿ ಕೆರೆ ಮತ್ತು ಶ್ರೀ ಚನ್ನಮ್ಮತಾಯಿ ಕೆರೆ ಇತ್ಯಾದಿ. ಮೇಲಾಗಿ ಇಲ್ಲಿ ಜಕ್ಕರಾಯ ಶಿಲ್ಪಿಯ ಕಲ್ಲುಕೆತ್ತನೆ ಪ್ರತೀತಿಯಾಗಿ ನವಲಗುಂದದಲ್ಲಿ ಶ್ರೀಗಣಪತಿ ದೇವಸ್ಥಾನವಿದೆ. ಹಾಗೂ ಬದಾಮಿ ಹೊಯ್ಸಳರ ಆಡಳಿತದಲ್ಲಿದ್ದ ಪಂಪ ಕವಿಯ ಜನ್ಮಸ್ಥಳವಾದ ಅಣ್ಣಿಗೇರಿ ಪಟ್ಟಣದಲ್ಲಿಯೂ ಒಂದು ಸುಂದರ ಸುಪ್ರಸಿದ್ಧವಾದ ಶ್ರೀಅಮೃತೇಶ್ವರ ದೇವಸ್ಥಾನವಿದೆ. ಮುಂದೆ ನವಿಲುಗುಂದದ ಹತ್ತಿಯ ದಾರದಿಂದ ಮಾಡಿದ ಜಮಖಾನೆಗಳು ಸಹ ತುಂಬ ಪ್ರಸಿದ್ಧವಾಗಿವೆ. ನವಲಗುಂದ ತಾಲೂಕಿನಲ್ಲಿ ಒಟ್ಟು ೫೭ ಹಳ್ಳಿಗಳಿದ್ದು, ಅವುಗಳಲ್ಲಿ ೨೨ ಗ್ರಾಮ ಪಂಚಾಯತಗಳು, ೨ ಪಟ್ಟಣ ಪಂಚಾಯತಗಳು ಇವೆ.

೨೨ ಗ್ರಾಮ ಪಂಚಾಯತಗಳು ಮತ್ತು ಅದಕ್ಕೆ ಸೇರಿದ ಗ್ರಾಮಗಳು (ಗ್ರಾಮಗಳ ಸಂಖ್ಯೆ)(ಗ್ರಾಮಗಳ ಹೆಸರು) 

ಅನುಕ್ರಮವಾಗಿ ಇಂತಿವೆ : 

೧. ಅಳಗವಾಡಿ(೧),
೨. ಹೆಬ್ಬಾಳ(೧),
೩. ಜಾವೂರ(೨) (ಜಾವೂರ, ಬಳ್ಳೂರು),
೪. ಗುಮ್ಮಗೋಳ(೨) (ಗುಮ್ಮಗೋಳ, ಬ್ಯಾಲ್ಯಾಳ),
೫. ಶಿರೂರ(೨) (ಶಿರೂರ, ಆಹೆಟ್ಟಿ)
೬. ಮೊರಬ(೨) (ಮೊರಬ, ತಲೆಮೊರಬ),
೭. ಶಿರಕೋಳ(೨) (ಶಿರಕೋಳ, ಹಣಸಿ),
೮. ತಿರ್ಲಾಪೂರ(೧),
೯. ಯಮನೂರ(೪) (ಯಮನೂರ, ಆರೇಕುರಹಟ್ಟಿ, ಪಡೇಸೂರ, ಕುಮಾರಗೊಪ್ಪ),
೧೦. ಹಾಲಕುಸುಗಲ್ಲ(೨)(ಹಾಲಕುಸುಗಲ್ಲ, ಶಾನವಾಡ),
೧೧. ಕಾಲವಾಡ (೪) (ಕಾಲವಾಡ, ಕರ್ಲವಾಡ, ಚಿಲಕವಾಡ, ಬೆಳಹಾರ),
೧೨. ಶಿಶುವಿನಹಳ್ಳಿ(೫)(ಶಿಶುವಿನಹಳ್ಳಿ, ದುಂದೂರ, ಬೆನ್ನೂರು, ಬಲ್ಲರವಾಡ, ನಾಗರಹಳ್ಳಿ),
೧೩. ನಲವಡಿ(೨)(ನಲವಡಿ, ಮಣಕವಾಡ),
೧೪. ಭದ್ರಾಪೂರ(೪) (ಭದ್ರಾಪೂರ, ಮಜ್ಜಿಗುಡ್ಡ, ಸೈದಾಪೂರ, ಬಸಾಪೂರ),
೧೫. ಹಳ್ಳಿಕೇರಿ(೩) (ಹಳ್ಳಿಕೇರಿ, ಸಾಸ್ವಿಹಳ್ಳಿ, ಕೊಂಡಿಕೊಪ್ಪ),
೧೬. ಇಬ್ರಾಹಿಂಪೂರ(೨) (ಇಬ್ರಾಹಿಂಪೂರ, ನಾವಳ್ಳಿ)
೧೭. ತುಪ್ಪದಕುರಹಟ್ಟಿ(೩) (ತುಪ್ಪದಕುರಹಟ್ಟಿ, ಅಡ್ನೂರು, ಕಿತ್ತೂರು),
೧೮. ಶಲವಡಿ(೧),
೧೯. ನಾಯಕನೂರ(೩)(ನಾಯಕನೂರ, ದಾಟನಾಳ, ಭೋಗಾನೂರ)
೨೦. ತಡಹಾಳ(೩)(ತಡಹಾಳ, ಅರಹಟ್ಟಿ, ಕೊಂಗವಾಡ),
೨೧. ಗುಡಿಸಾಗರ(೪)(ಗುಡಿಸಾಗರ, ನಾಗನೂರು, ಕಡದಳ್ಳಿ, ಸೊಟಕನಹಾಳ),
೨೨. ಬೆಳವಟಗಿ(೩)(ಬೆಳವಟಗಿ, ಅಮರಗೋಳ, ಗೊಬ್ಬರಗುಂಪಿ)

೨ ಪಟ್ಟಣ ಪಂಚಾಯತಗಳು ಇಂತಿವೆ :

 ೧. ನವಲಗುಂದ ಪಟ್ಟಣ, ೨. ಅಣ್ಣಿಗೇರಿ ಪಟ್ಟಣ.
ವಿವಿಧ ರೀತಿಯ ಜಮುಖಾನೆ ತಯಾರಿಕೆಗೆ ಈ ಊರು ಹೆಸರುವಾಸಿಯಾಗಿದೆ.

21 Feb 2015

Shri Ganapati Devastana Navalgund (ಶ್ರೀ ಗಣಪತಿ ದೇವಸ್ತಾನ, ವಿನಾಯಕ ಪೇಟ್ ನವಲಗುಂದ)

ಶ್ರೀ ಗಣಪತಿ ದೇವಸ್ತಾನದ ಗರ್ಭಗುಡಿಯ ಮೂರ್ತಿ, ವಿನಾಯಕ ಪೇಟ್ ನವಲಗುಂದ
 

ಶ್ರೀ ಗಣಪತಿ ಗುಡಿಯ ರಥೋತ್ಸವದ ವಿಗ್ರಹ , ವಿನಾಯಕ ಪೇಟ್ ನವಲಗುಂದ

ನೀಲಮ್ಮನ ಕೆರೆ (Nilammana Kere)

"ನೀಲಮ್ಮ ಕೆರೆ" ಮಹಾದ್ವಾರ ನವಲಗುಂದ



          ಪಟ್ಟಣ ಪಂಚಾಯತ ನವಲಗುಂದ ಕೆರೆಯ ಇತಿಹಾಸ 1998 ನವಲಗುಂದ ಪಟ್ಟಣವು ಐತಿಹಾಸಿಕ ಹಿನ್ನಲೆ ಹೊಂದಿರುವ ಪಟ್ಟವಾಗಿದ್ದು ಕ್ರಿ.ಶ.1897 ರಿಂದ 1906 ರ ವರೆಗೆ "ದೇಶ ಸೇವೆ" ಏಂದು ರಾಜ್ಯವಾಳಿದ ಶಿರಸಂಗಿಯ ಲಿಂಗರಾಜರು ತಮ್ಮ ಸಹೋದರಿಯರಲ್ಲಿ ಒಬ್ಬರಾದ "ನೀಲಮ್ಮ" ಇವರಿಗೆ ಉಡುಗೊರೆಯಾಗಿ ಕೊಟ್ಟಿರುವ ಅಂದಾಜು ೧೯-೩೮ ಏಕರೆ ಭೂಮಿಯಲ್ಲಿ ತಾಯಿ ನೀಲಮ್ಮನವರು ಆ ಕಾಲಕ್ಕೆ ಒಂದು ದೊಡ್ಡ ಕೆರೆಯನ್ನು ಕಡಿಸಿ ಇಡೀ ಊರಿನ ಬಡವ ಬಲ್ಲದವರಿಗೂ ಎಲ್ಲ ಜಾತಿ ಜನಾಂಗದವರಿಗೆ ಕುಡಿಯುವ ನೀರಿನ ಅನುಕೂಲತೆ ಮಾಡಿಕೊಟ್ಟು ಪುಣ್ಯಭಾಗಿಗಳಾದರು. ಅಂದಿನಿಂದ ಇಂದಿನವರೆಗೂ
ಈ ಕೆರೆಯು "ನೀಲಮ್ಮನ ಕೆರೆ" ಎಂದೇ ಪ್ರಸಿದ್ದಿ ಪಡೆದಿದೆ.
ಈ ಕೆರೆಯು ಪಟ್ಟಣ ಪಂಚಾಯಿತಿಯ ಸ್ವಾಧೀನದಲ್ಲಿದೆ.
         ಈ ಕೆರೆಯೊಂದೇ ನಗರವಾಸಿಗಳಿಗೆ ಏಕಮೇವ ಕುಡಿಯುವ ನೀರಿನ ಆಕರವಾಗಿರುವ ಕಾರಣ ಪಟ್ಟಣ ಪಂಚಾಯತಿಯೇ ಉಸ್ತುವಾರಿ ವಹಿಸುತ್ತಿದೆಯಲ್ಲದೇ ಕೆರೆಯ ಸ್ವಚ್ಛತೆಗಾಗಿ ವಿಶೇಷ ನಿಗಾವಹಿಸುತ್ತಿದೆ

15 Feb 2015

ಶ್ರೀ ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳ ಮಹಾದ್ವಾರ ನವಲಗುಂದ


 


List of Navalgund Villages

* Villages in Navalgund Taluk *

Sl No, Village Name, Village Code :

1 Adnur 602358
2 Ahetti 602316
3 Alagawadi 602323
4 Amaragol 602324
5 Annigeri (Rural) 602372
6 Annigeri (TMC) 803086
7 Arahatti 602343
8 Arekurahatti 602337
9 Ballarawad 602364
10 Ballur 602329
11 Basapur 602361
12 Belahar 602341
13 Belavatagi 602325
14 Bennur 602365
15 Bhadrapur 602370
16 Bhoganur 602349
17 Byalal 602319
18 Chilakawad 602338
19 Datanal 602351
20 Dundur 602366
21 Gobbaragumpi 602326
22 Gudisagar 602348
23 Gummagol 602318
24 Halakusugal 602328
25 Hallikeri 602359
26 Hanashi 602320
27 Hebbal 602322
28 Ibrahimpur 602354
29 Javoor 602321
30 Kadadahalli 602342
31 Kalawad 602340
32 Karlawad 602339
33 Khannur 602353
34 Kittur 602357
35 Kondikoppa 602363
36 Kongawad 602345
37 Kumaragoppa 602336
38 Majjigudda 602371
39 Manakawad 602368
40 Morab 602331
41 Naganur 602347
42 Nagarahalli 602360
43 Naikanur 602350
44 Nalavadi 602369
45 Navalgund (TMC) 803085
46 Navalli 602355
47 Padesur 602334
48 Saidapur 602373
49 Saswihalli 602362
50 Shanawad 602327
51 Shelawadi 602352
52 Shirkol 602330
53 Shirur 602317
54 Siswinahalli 602367
55 Sotakanal 602346
56 Tadahal 602344
57 Talimorab 602332
58 Tirlapur 602333
59 Tuppadakurahatti 602356
60 Yamanur 602335

ನವಲಗುಂದ (ನವಿಲುಗುಂದ) ಇದು ನಮ್ಮೂರು



ನವಲಗುಂದ ಪಟ್ಟಣವು ಐತಿಹಾಸಿಕ ಸಾಧು ಸಂತರು ನೆಲೆಸಿದ ಪುಣ್ಯ ಭೂಮಿಯಾಗಿದ್ದು ಈ ಪಟ್ಟಣವು ಭಾರತ ರಾಷ್ಟ್ರದ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯಲ್ಲಿ ಬರುವ ತಾಲೂಕ ಕೇಂದ್ರಸ್ಥಾನವಾಗಿದೆ. ಅಣ್ಣಿಗೇರಿ ರೈಲು ನಿಲ್ದಾಣದಿಂದ 17ಕಿ.ಮಿ ಅಂತರದಲ್ಲಿದೆ ಹಾಗೂ ರಾಷ್ಟ್ರಿಯ ಹೆದ್ದಾರಿ 218ರಲ್ಲಿ ಹುಬ್ಬಳ್ಳಿಯಿಂದ ನಗರದಿಂದ 35ಕಿ.ಮಿ ಅಂತರದಲ್ಲಿದೆ.ಅಲ್ಲದೇ ಹುಬ್ಬಳ್ಳಿಯಿಂದ ವಿಮಾನಯಾನ ಸೌಲಭ್ಯವನ್ನು ಸಹ ಹೊಂದಿದೆ. ನವಲಗುಂದ ಪಟ್ಟಣದಲ್ಲಿ ಸರ್ವ ಧರ್ಮದ ಜನಾಂಗದವರು ವಾಸಿಸುತ್ತಿದ್ದು,ಸೌಹಾರ್ದಯುತ ಜನ ಜೀವನಕ್ಕೆ ಹಿಡಿದ ಕನ್ನಡಿಯಾಗಿದೆ.ಸರ್ವ ಧರ್ಮದ ಶಾಂತಿಯ ತೋಟ ಇದ್ದಂತೆ ಇರುವ ಪಟ್ಟಣವಾಗಿದೆ. ನವಲಗುಂದ ಭೌಗೋಳಿಕ ಕ್ಷೇತ್ರವು ಕಪ್ಪು ಜೇಡಿ ಮಣ್ಣಿನಿಂದ ಕೂಡಿದ್ದು.ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.ಅಲ್ಲದೇ ಗುಡಿ ಕೈಗಾರಿಕೆ ಹಾಗೂ ಕರಕುಶಲ ಕರ್ಮಿಗಳು ವಾಸಿಸುತ್ತಿದ್ದಾರೆ.ಇದಕ್ಕೆ ಸಾಕ್ಷಿ ಎಂಬತ ನವಲಗುಂದದ ಕೈಮಗ್ಗ ಜಮಖಾನೆಗಳು ಜಗತ್ತ ಪ್ರಸಿದ್ದಿಯನ್ನು ಪಡೆದಿರುತ್ತವೆ.ನವಲಗುಂದದಲ್ಲಿ ಅನೇಕ ಸಾಧು ಸಂತರು ಆಗಿ ಹೋಗಿದ್ದು,ಇವರಲ್ಲಿ ಗವಿಮಠದ ಶ್ರೀ ಮ.ನಿ.ಪ್ರ.ಜಡೆ ಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀ ಜಗದ್ಗುರು ಯತಿಚಕ್ರವರ್ತಿ ಅಜಾತ ನಾಗಲಿಂಗ ಮಹಾಸ್ವಾಮಿಗಳು ಅಲ್ಲದೇ ಹಿರೇಮಠದ ಕತ್ರು ಶ್ರೀ ಷ.ಬ್ರ.ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಹುರಕಡ್ಲಿ ಅಜ್ಜನವರು ಹೀಗೆ ಇನ್ನೂ ಹಲವಾರು ಪವಾಡ ಪುರುಷರು ನೆಲಸಿದ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಅಲ್ಲದೇ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಇವರು ನೆಲೆಸಿದ ನಾಡು ಮತ್ತು ಅವರ ಸಮಾಧಿಯು ಸಹ ನವಲಗುಂದದಲ್ಲಿ ಇಂದಿಗೂ ಇರುತ್ತದೆ.