15 Feb 2015

ನವಲಗುಂದ (ನವಿಲುಗುಂದ) ಇದು ನಮ್ಮೂರು



ನವಲಗುಂದ ಪಟ್ಟಣವು ಐತಿಹಾಸಿಕ ಸಾಧು ಸಂತರು ನೆಲೆಸಿದ ಪುಣ್ಯ ಭೂಮಿಯಾಗಿದ್ದು ಈ ಪಟ್ಟಣವು ಭಾರತ ರಾಷ್ಟ್ರದ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯಲ್ಲಿ ಬರುವ ತಾಲೂಕ ಕೇಂದ್ರಸ್ಥಾನವಾಗಿದೆ. ಅಣ್ಣಿಗೇರಿ ರೈಲು ನಿಲ್ದಾಣದಿಂದ 17ಕಿ.ಮಿ ಅಂತರದಲ್ಲಿದೆ ಹಾಗೂ ರಾಷ್ಟ್ರಿಯ ಹೆದ್ದಾರಿ 218ರಲ್ಲಿ ಹುಬ್ಬಳ್ಳಿಯಿಂದ ನಗರದಿಂದ 35ಕಿ.ಮಿ ಅಂತರದಲ್ಲಿದೆ.ಅಲ್ಲದೇ ಹುಬ್ಬಳ್ಳಿಯಿಂದ ವಿಮಾನಯಾನ ಸೌಲಭ್ಯವನ್ನು ಸಹ ಹೊಂದಿದೆ. ನವಲಗುಂದ ಪಟ್ಟಣದಲ್ಲಿ ಸರ್ವ ಧರ್ಮದ ಜನಾಂಗದವರು ವಾಸಿಸುತ್ತಿದ್ದು,ಸೌಹಾರ್ದಯುತ ಜನ ಜೀವನಕ್ಕೆ ಹಿಡಿದ ಕನ್ನಡಿಯಾಗಿದೆ.ಸರ್ವ ಧರ್ಮದ ಶಾಂತಿಯ ತೋಟ ಇದ್ದಂತೆ ಇರುವ ಪಟ್ಟಣವಾಗಿದೆ. ನವಲಗುಂದ ಭೌಗೋಳಿಕ ಕ್ಷೇತ್ರವು ಕಪ್ಪು ಜೇಡಿ ಮಣ್ಣಿನಿಂದ ಕೂಡಿದ್ದು.ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.ಅಲ್ಲದೇ ಗುಡಿ ಕೈಗಾರಿಕೆ ಹಾಗೂ ಕರಕುಶಲ ಕರ್ಮಿಗಳು ವಾಸಿಸುತ್ತಿದ್ದಾರೆ.ಇದಕ್ಕೆ ಸಾಕ್ಷಿ ಎಂಬತ ನವಲಗುಂದದ ಕೈಮಗ್ಗ ಜಮಖಾನೆಗಳು ಜಗತ್ತ ಪ್ರಸಿದ್ದಿಯನ್ನು ಪಡೆದಿರುತ್ತವೆ.ನವಲಗುಂದದಲ್ಲಿ ಅನೇಕ ಸಾಧು ಸಂತರು ಆಗಿ ಹೋಗಿದ್ದು,ಇವರಲ್ಲಿ ಗವಿಮಠದ ಶ್ರೀ ಮ.ನಿ.ಪ್ರ.ಜಡೆ ಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀ ಜಗದ್ಗುರು ಯತಿಚಕ್ರವರ್ತಿ ಅಜಾತ ನಾಗಲಿಂಗ ಮಹಾಸ್ವಾಮಿಗಳು ಅಲ್ಲದೇ ಹಿರೇಮಠದ ಕತ್ರು ಶ್ರೀ ಷ.ಬ್ರ.ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಹುರಕಡ್ಲಿ ಅಜ್ಜನವರು ಹೀಗೆ ಇನ್ನೂ ಹಲವಾರು ಪವಾಡ ಪುರುಷರು ನೆಲಸಿದ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಅಲ್ಲದೇ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಇವರು ನೆಲೆಸಿದ ನಾಡು ಮತ್ತು ಅವರ ಸಮಾಧಿಯು ಸಹ ನವಲಗುಂದದಲ್ಲಿ ಇಂದಿಗೂ ಇರುತ್ತದೆ.




No comments:

Post a Comment